Gold Price Today: ಚಿನ್ನದ ಬೆಲೆಯಲ್ಲಿ ಮತ್ತೆ ಭಾರಿ ಇಳಿಕೆ

Gold Price Today: ಚಿನ್ನದ ಬೆಲೆಯಲ್ಲಿ ಮತ್ತೆ ಭರ್ಜರಿ ಕುಸಿತ!

Gold Price: ವಿಶ್ವದಾದ್ಯಂತ ಷೇರುಮಾರುಕಟ್ಟೆ ಲೆಕ್ಕಾಚಾರಗಳು ತೆಲೆಕೆಳಗಾಗಿವೆ. ಭಾರತದಲ್ಲೂ ಷೇರುಮಾರುಕಟ್ಟೆ ಪೂರ್ಣ ಪ್ರಮಾಣದಲ್ಲಿ ಇಳಿಕೆ ಕಂಡಿವೆ. ಕೋಟ್ಯಾಂತರ ರೂಪಾಯಿ ನಷ್ಟವಾಗುತ್ತಿವೆ, ಈ ರೀತಿಯ ಸಂದರ್ಬ ಎದುರಾದಾಗಲೆಲ್ಲವೂ ಚಿನ್ನದ ಬೆಲೆಯಲ್ಲಿ ಭಾರಿ ಏರಿಕೆ ಉಂಟಾಗುತ್ತಿತ್ತು. ಆದರೆ ಅಮೆರಿಕದ ಅದ್ಯಕ್ಷ ಡೊನಾಲ್ಡ್ ಟ್ರಂಪ್ ನ ಹೆಚ್ಚು ನಿರ್ಧಾರಗಳ ನಡುವೆಯೂ ಇದೀಗ ಚಿನ್ನದ ಬೆಲೆ ಭರ್ಜರಿ ಇಳಿಕೆ ಕಂಡಿದೆ. ದೇಶದಲ್ಲಿ ಚಿನ್ನದ ಬೆಲೆ ಇನ್ನಷ್ಟು ಇಳಿಕೆಯಾಗುವ ಸಾಧ್ಯತೆ ಇದೆ. ಏಪ್ರಿಲ್ 09ರ ಚಿನ್ನ ಮತ್ತು ಬೆಳ್ಳಿ ಬೆಲೆ ಎಷ್ಟಿದೆ ಎನ್ನುವ ವಿವರ ನೋಡೋಣ.

ಏಪ್ರೀಲ್ 9ರ 22 ಕ್ಯಾರೆಟ್ ಚಿನ್ನದ ಬೆಲೆ: ಏಪ್ರಿಲ್ 09ಕ್ಕೆ ಬುಧವಾರ 22 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ 1 ಗ್ರಾಂ ಗೆ 8,224 ರೂಪಾಯಿ ಆಗಿದೆ. 10 ಗ್ರಾಂ ಗೆ 82,240 ರೂಪಾಯಿ ಆಗಿದೆ. ನೆನ್ನೆಗಿಂತ ಇಂದು ಚಿನ್ನದ ಬೆಲೆ ಇಳಿಕೆ ಕಂಡಿದೆ. ಕಳೆದ ಮೂರ್ನಾಲ್ಕು ದಿನದಿಂದಲೂ ಚಿನ್ನದ ಬೆಲೆ ಇಳಿಕೆಯಾಗುತ್ತಿದೆ.

24 ಕ್ಯಾರೆಟ್ ಚಿನ್ನದ ಬೆಲೆ:

ಇನ್ನೂ 24 ಕ್ಯಾರೆಟ್ ಚಿನ್ನದ ಬೆಲೆಯಲ್ಲೂ ಮಂಗಳವಾರ ಭರ್ಜರಿ ಇಳಿಕೆಯಾಗಿತ್ತು. ಬುಧವಾರವೂ ಈ ಇಳಿಕೆ ಮುಂದುವರೆದೆ. 24 ಕ್ಯಾರೆಟ್ ಚಿನ್ನದ ಬೆಲೆಯೂ ಪ್ರತಿ 1 ಗ್ರಾಂ ಗೆ 8,972 ರೂಪಾಯಿ ಆಗಿದೆ. 10 ಗ್ರಾಂ ಗೆ 89,720 ರೂಪಾಯಿ ಆಗಿದೆ.

18 ಕ್ಯಾರೆಟ್ ಚಿನ್ನದ ಬೆಲೆ ಎಷ್ಟಿದೆ ಗೊತ್ತ? 18 ಕ್ಯಾರೆಟ್ ಚಿನ್ನದ ಬೆಲೆ 1 ಗ್ರಾಂಗೆ 6,729 ರೂಪಾಯಿ ಆಗಿದೆ. 10 ಗ್ರಾಂಗೆ 67,290 ರೂಪಾಯಿ ಆಗಿದೆ.

ಚಿನ್ನದ ಬೆಲೆಯಲ್ಲಿ ಇನ್ನಷ್ಟು ಇಳಿಕೆಯಾಗುವ ಸಾಧ್ಯತೆ ಇದೆ. ಇನ್ನೊಂದು ವಾರ ಇದೇ ರೀತಿ ಚಿನ್ನದ ಬೆಲೆಯಲ್ಲಿ ಇಳಿಕೆ ಮುಂದುವರೆದರೆ ಮುಂದಿನ ದಿನಗಳಲ್ಲಿ ಚಿನ್ನದ ಬೆಲೆಯೂ ಹಳೆಯ ರೇಟ್ ಗೆ ಅಥವಾ 10 ರಿಂದ 15 ಸಾವಿರ ರೂಪಾಯಿ ಇಳಿಕೆಯಾಗಬಹುದು.

Leave a Comment

Your email address will not be published. Required fields are marked *