RTE: Right to Education 2025 Application Open

RTE ಉಚಿತ ಖಾಸಗಿ ಶಾಲೆ ನೇಮಕಾತಿ ಪಡಯಲು ಅರ್ಜಿ ಆಹ್ವಾನ

ಆರ್ ಟಿ ಇ ಖಾಸಗಿ ಶಾಲೆಯಲ್ಲಿ ಲಕ್ಷಾಂತರ ರೂಪಾಯಿ Donation ಕೊಟ್ಟು ಶಿಕ್ಷಣ ಕೊಡಿಸಲು ಬಡ ತಂದೆ ತಾಯಿ ಕೈಯಲ್ಲಿ ಆಗೊಲ್ಲ ಅಂತ ತಂದೆ ತಾಯಿ ಗೆ ಸಹಾಯ ಆಗಲಿ ಅಂತ ಸರ್ಕಾರ ರೂಪಿಸಿದ ಹೊಸ ಯೋಜನೆ 2009 ರಲ್ಲಿ RTE Right to Education ಅಂತ ಈ ಯೋಜನೆಯಿಂದ ಮಕ್ಕಳಿಗೆ ಒಳ್ಳೆಯ ಶಿಕ್ಷಣ ಸಿಗಲಿ ಬಡ ಮಕ್ಕಳು ಸಹ ದೊಡ್ಡ ದೊಡ್ಡ ಖಾಸಗಿ ಶಾಲೆಗಳಲ್ಲಿ ಓದಲಿ ಎನ್ನುವ ನಿಟ್ಟಿನಲ್ಲಿ ಸರ್ಕಾರ ಈ ಯೋಜನೆಯನ್ನು ಜಾರಿಗೆ ತಂದಿದೆ.

ಈ ಯೋಜನೆಯಲ್ಲಿ ನಿಮ್ಮ ಮಕ್ಕಳನ್ನು ನೀವು ಸಹ ಶಾಲೆಗೆ ಸೇರಿಸಬೇಕು ಯಾವುದೇ donation ಇಲ್ಲದೇ ಖಾಸಗಿ ಶಾಲೆಯಲ್ಲಿ ಓದಿಸಬೇಕು ಎಂಬ ಆಸೆ ಇದ್ದರೇ ಅಂತಹ ತಂದೆ ತಾಯಿಗೆ ಒಂದು ಒಳ್ಳೆಯ ಅವಕಾಶ ಈಗಲೇ ನೀವು ಕೂಡ ನಿಮ್ಮ ಮಕ್ಕಳನ್ನು ಖಾಸಗಿ ಶಾಲೆಗಳಲ್ಲಿ ಓದಿಸುವ ಆಸೆ ಇದ್ದರೇ ಈಗಲೇ ನಿವು ಕೂಡ ಅರ್ಜಿ ಹಾಕಬಹುದು ಹೇಗೆ ಅರ್ಜಿ ಹಾಕಬೇಕು ಏನೆಲ್ಲದಾಖಲಾತಿಗಳು ಬೇಕು ಎನ್ನುವುದನ್ನು ಕೆಳಗಡೆ ಕೊಟ್ಟಿದೆ ನೋಡಿ ಅಷ್ಟೇ ಅಲ್ಲ ವೆಬ್ ಸೈಟ್ ಲಿಂಕ್ ಸಹ ಇರುತ್ತೆ apply ಮಾಡಿ.

ಬೇಕಾಗುವ ದಾಖಲಾತಿಗಳು:

  1. ಮಗುವಿನ ಆಧಾರ್ ಕಾಡ್೯
  2. ತಂದೆ ತಾಯಿ ಆಧಾರ್ ಕಾಡ್೯
  3. ಮಗುವಿನ ಜನನ ಪ್ರಮಾಣ ಪತ್ರ
  4. ಜಾತಿ ಆದಾಯ ಪ್ರಮಾಣ ಪತ್ರ
  5. ವಾಸಸ್ಥಳ ಪ್ರಮಾಣ ಪತ್ರ

ವಯಸ್ಸಿನ ಮೀತಿ ಎಷ್ಟಿರಬೇಕು:

LKG ಸೇರಿಸುವ ಮಕ್ಕಳ ವಯಸ್ಸಿನ ಮೀತಿ 3 ವರ್ಷ 10 ತಿಂಗಳಿನಿಂದ 4 ವರ್ಷ 10 ತಿಂಗಳಿನೊಳಗೆ ಇರಬೇಕು.

1 ನೇ ತರಗತಿ ಪ್ರವೇಶ ಪಡೆಯಲು 5 ವರ್ಷ 10 ತಿಂಗಳಿನಿಂದ 6 ವರ್ಷ 10 ತಿಂಗಳಿನೊಳಗೆ ಇರಬೇಕು

ಪೋಷಕರ ವಾರ್ಷಿಕ ಆದಾಯ 2 ಲಕ್ಷಕ್ಕಿಂತ ಕಡಿಮೆ ಇರಬೇಕು 2 ಲಕ್ಷ ಮೀತಿ ಮೀರಿರಬಾರದು.

BPL ರೇಷನ್ ಕಾಡ್೯ ಹೊಂದಿರಬೇಕು.

RTE 2025-26 ರ ವೇಳಾಪಟ್ಟಿ:

  1. ಅರ್ಜಿ ಸಲ್ಲಿಕೆ ಆರಂಭ: ಏಪ್ರಿಲ್ 15
  2. ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ: ಮೇ 12
  3. ಅರ್ಜಿಗಳ ದಾಖಲೆ ಪರೀಶಿಲನೆ: ಮೇ 14
  4. ಅರ್ಹ ಅಭ್ಯರ್ಥಿಗಳ ಪ್ರಕಟಣೆ: ಮೇ 17
  5. ಮೊದಲ ಹಂತದ ಲಾಟರಿ ಆಧಾರಿತ ಸೀಟ್ ಹಂಚಿಕೆ: ಮೇ 21
  6. ಆಯ್ಕೆಯಾದ ಮಕ್ಕಳು ಶಾಲೆಗೆ ಪ್ರವೇಶ ದಿನಾಂಕ: ಮೇ ಕೊನೆಯ ವಾರ

ಹೇಗೆ ಆಯ್ಕೆ ಮಾಡಲಾಗುತ್ತದೆ:

ಅರ್ಜಿ ಸಲ್ಲಿಸಿದ ಮಕ್ಕಳ ವಯಸ್ಸಿನ ಮತ್ತು ಪೋಷಕರ ಹಿನ್ನಲೆ ಆಧಾರದ ಮೇಲೆ ಆಯ್ಕೆ ಪ್ರಕ್ರಿಯೆ ನಡೆಯುತ್ತೆ.

ಯಾವುದೇ ಕಾರಣಕ್ಕೂ ಪೋಷಕರು ಸುಳ್ಳು ಮಾಹಿತಿ ಕೊಟ್ಟು ಅರ್ಜಿ ಹಾಕುವಂತಿಲ್ಲ ಆ ರೀತಿ ಮಾಡದರೇ ಅಂತಹ ಅರ್ಜಿಗಳನ್ನು ರದ್ದು ಮಾಡಲಾಗುತ್ತೆ.

 

ಅರ್ಜಿ ಸಲ್ಲಿಸುವ Direct ಲಿಂಕ್ ಕೆಳಗಡೆ ಇದೆ ಅದರ ಮೇಲೆ ಕ್ಲಿಕ್ ಮಾಡಿ ಅರ್ಜಿ ಹಾಕಿ

Leave a Comment

Your email address will not be published. Required fields are marked *