ಕಟ್ಟಡ ಕಾರ್ಮಿಕರ ಮಕ್ಕಳಿಗೆ ಸಿಗುತ್ತೆ ಸರ್ಕಾರದಿಂದ ಉಚಿತ ಸ್ಕಾಲರ್ಶಿಪ್
SSLC Result ಬಂದು ಇನ್ನೂ ಒಂದು ವಾರ ಕೂಡ ಆಗಿಲ್ಲ ಅಷ್ಟರಲ್ಲಿ ಇದೀಗ ಸ್ಕಾಲರ್ಶಿಪ್ ಗೆ ಅರ್ಜಿ ಆಹ್ವಾನ ಮಾಡಿದ್ದಾರೆ. ಕಟ್ಟಡ ಮತ್ತು ಕೂಲಿ ಕಾರ್ಮಿಕರ ಮಕ್ಕಳಿಗೆ ಸರ್ಕಾರದಿಂದ ಉಚಿತ ಸ್ಕಾಲರ್ಶಿಪ್ ಸಿಗುತ್ತೆ. ಅರ್ಹ ಅಭ್ಯರ್ಥಿಗಳು ಅರ್ಜಿ ಹಾಕಿ.
ಯಾರೆಲ್ಲ ಈ ಯೋಜನೆಗೆ ಅರ್ಹರಾಗಿರುತ್ತಾರೆ ಹೇಗೆ ಅರ್ಜಿ ಸಲ್ಲಿಸಬೇಕು ಏನೆಲ್ಲಾ ದಾಖಲಾತಿಗಳು ಬೇಕು ಲಿಂಕ್ ಎಲ್ಲಿದೆ ಸಂಪೂರ್ಣ ಮಾಹಿತಿಯನ್ನು ಕೆಳಗಡೆ ಇದೆ ಹಾಗೇ ಅರ್ಜಿ ಲಿಂಕ್ ಸಹಿತ ಇದೆ.
ಬಡ ವಿದ್ಯಾರ್ಥಿಗಳಿಗೆ ಸಹಾಯವಾಗಲಿ ಎಂದು ಸರ್ಕಾರ ಈ ಯೋಜನೆಯನ್ನು ಜಾರಿಗೆ ತಂದಿದೆ. ಯಾವೆಲ್ಲಾ ತಂದೆ ತಾಯಿಯರಿಗೆ ಮಕ್ಕಳ ವಿದ್ಯಾಭ್ಯಾಸಕ್ಕೆ ದುಡ್ಡು ಇರೊದಿಲ್ಲ ಅಂತಹ ಮಕ್ಕಳಿಗೆ ನೆರವಾಗಲೆಂದು ಸರ್ಕಾರ ಈ ಯೋಜನೆ ಜಾರಿಗೆ ತಂದಿದೆ.
ಇನ್ನೂ ಯಾವೆಲ್ಲಾ ವಿದ್ಯಾರ್ಥಿಗಳು ಅರ್ಹರೆಂದರೆ ಯಾರ ಮಕ್ಕಳು Labour Card ಅಂದರೆ ಕಾರ್ಮಿಕ ಕಾಡ್೯ ಹೊಂದಿರುತ್ತಾರೆ ಅಂತಹ ತಂದೆ ತಾಯಿ ಮಕ್ಕಳಿಗೆ ಈ ಯೋಜನೆ ಅನ್ವಯಿಸುತ್ತದೆ. ಇನ್ನೂ ನಿಮ್ಮ ಮನೆಯಲ್ಲಿ 1 ನೇ ತರಗತಿಯಿಂದ up to degree ಓದುವ ಮಕ್ಕಳಿದ್ದರೂ ಅರ್ಜಿ ಹಾಕಬಹುದು.
ಬೇಕಾಗುವ ದಾಖಲಾತಿಗಳು: Required Documents
- ತಂದೆಯ ಲೆಬರ್ ಕಾಡ್೯
- ತಾಯಿಯ ಲೆಬರ್ ಕಾಡ್೯
- ತಂದೆ ತಾಯಿ ಇಬ್ಬರದ್ದು ಆಧಾರ್ ಕಾಡ್೯
- ವಿದ್ಯಾರ್ಥಿಯ ಆಧಾರ್ ಕಾಡ್೯
- ವಿದ್ಯಾರ್ಥಿಯ ಹಿಂದಿನ ವರ್ಷದ ಮಾಕ್ಸ್ ಕಾಡ್೯
- ತಂದೆ ತಾಯಿ ವಿದ್ಯಾರ್ಥಿ ಮೂರು ಜನರದ್ದು ಬ್ಯಾಂಕ್ ಪಾಸ್ ಬುಕ್
ಯಾರೆಲ್ಲಾ ವಿದ್ಯಾರ್ಥಿಗಳು ಅರ್ಹರು: Which Students are Eligible
- ಭಾರತೀಯ ನಿವಾಸಿಗಳು ಆಗಿರಬೇಕು.
- ಕಾರ್ಮಿಕ ಕಾಡ್೯ Labour Card ಹೊಂದಿರಬೇಕು.
- ತಂದೆ ತಾಯಿ ಕೂಲಿ ಕಾರ್ಮಿಕರಾಗಿರಬೇಕು.
- ತಂದೆ ತಾಯಿಯ ವಾರ್ಷಿಕ ಆದಾಯ Annual Income 32 ಸಾವಿರಕ್ಕಿಂತ ಕೇಳಗಡೆ ಇರಬೇಕು.
ಹೇಗೆ ಅರ್ಜಿ ಸಲ್ಲಿಸಬೇಕು: How to apply this scholarship
ಈ ಯೋಜನೆಯನ್ನು ಆನ್ಲೈನ್ ಮುಂಖಾತರ ಅರ್ಜಿ ಸಲ್ಲಿಸಬೇಕು. ಯಾವುದೇ ಕಾರಣಕ್ಕೂ Manual ಹಾಗೇ ಅರ್ಜಿ ಸಲ್ಲಿಸುವಂತಿಲ್ಲ, ಇನ್ನೂ ನಾನು ಕೆಳಗಡೆ apply Link ಕೊಟ್ಟಿದ್ದೇನೆ ಅದರ ಮೇಲೆ ಕ್ಲಿಕ್ ಮಾಡಿ Apply ಮಾಡಿ
Application Link:
https://karbwwb.karnataka.gov.in