ಕರ್ನಾಟಕ ದ್ವೀತಿಯ ಪಿಯುಸಿ (PUC) ಪರೀಕ್ಷೆಯ ಮೌಲ್ಯಮಾಪನ ಬಹುತೇಕ ಮುಗಿದ್ದಿದ್ದು, ಫಲಿತಾಂಶ ಪ್ರಕಟಣೆಗೆ ದಿನಗಣನೆ ಆರಂಭವಾಗಿದೆ. ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ (KSEAB) ಫಲಿತಾಂಶದ ಪ್ರಕಟಣೆ ಕುರಿತು ಮಹತ್ವದ ಮಾಹಿತಿ ನೀಡಿದೆ.
ಕಳೆದ ಮಾಚ್೯ 1 ರಿಂದ ಮಾಚ್೯ 20 ರವರೆಗೆ ನಡೆದ ಪಿಯುಸಿ ಪರೀಕ್ಷೆಯಲ್ಲಿ ಒಟ್ಟು 7,13,362 ವಿದ್ಯಾರ್ಥಿಗಳು ನೋಂದಾಯಿಸಿದ್ದರು, ಈ ಪೈಕಿ 6,61,624 ಹೊಸ ವಿದ್ಯಾರ್ಥಿಗಳು 31072 ಪುನರಾವರ್ತಿತ ವಿದ್ಯಾರ್ಥಿಗಳು ಮತ್ತು 18,317 ಮಂದಿ ಖಾಸಗಿ ವಿದ್ಯಾರ್ಥಿಗಳು ಆಗಿದ್ದರು. ರಾಜ್ಯದ 1,171 ಪರೀಕ್ಷಾ ಕೇಂದ್ರಗಳಲ್ಲಿ ಈ ಪರೀಕ್ಷೆ ಆಯೋಜಿಸಲಾಗಿತ್ತು.
ಫಲಿತಾಂಶದ ಪ್ರಕಟಣೆ ಯಾವಾಗ?
ಕಳೆದ ವರ್ಷ ದ್ವಿತೀಯ ಪಿಯುಸಿ ಫಲಿತಾಂಶವನ್ನು ಏಪ್ರಿಲ್ 10 ರಂದು ಪ್ರಕಟಿಸಲಾಗುತ್ತು. ಈ ವರ್ಷವು ಸರಿಸುಮಾರು ಅದೇ ಸಮಯದಲ್ಲಿ ಫಲಿತಾಂಶ ಪ್ರಕಟವಾಗುವ ನೀರಿಕ್ಷೆ ಇದೆ. ಮೌಲ್ಯ ಮಾಪನ ಪ್ರಕ್ರೀಯೆ ಈಗ ಅಂತಿಮ ಹಂತದಲ್ಲಿದ್ದು, ಏಪ್ರಿಲ್ ಮೊದಲವಾರದೊಳಗೆ ಸಂಪೂರ್ಣಗೊಳ್ಳಲಿದೆ. ವಿದ್ಯಾರ್ಥಿಗಳು ತಮ್ಮ ಫಲಿತಾಂಶವನ್ನು ಅಧಿಕೃತ ವೆಬ್‌ಸೈಟ್‌ನಲ್ಲಿ ನೋಡಬಹುದಾಗಿದೆ.
ಫಲಿತಾಂಶ ವೀಕ್ಷಿಸುವ ವಿಧಾನ:
ದ್ವೀತಿಯ ಪಿಯುಸಿ ಫಲಿತಾಂಶವು:
https://kseab.karnataka.gov.in ಅಥವಾ
https://karresults.nic.in ಈ ವೆಬ್ ಸೈಟ್ ಗಳಲ್ಲಿ ಫಲಿತಾಂಶ ಲಭ್ಯವಾಗಲಿದೆ.
ಎಲ್ಲಾ ವಿದ್ಯಾರ್ಥಿಗಳು ನಿಮ್ಮ Halticket number ಮತ್ತು ಹುಟ್ಟಿದ ದಿನಾಂಕ ಹಾಕಿ ಚೆಕ್ ಮಾಡಿಕೊಳ್ಳಿ. ಇನ್ನೂ ಹೆಚ್ಚಿನ ಮಾಹಿತಿಗಾಗಿ ನಿಮ್ಮ ಕಾಲೇಜಿಗ ಹೋಗಿ ವಿಚಾರಿಸಿ ಹಾಗೇ ಶುಭವಾಗಲಿ ನಿಮ್ಮ result ಗೆ All The Best Students.